Top News

ಆಂಧ್ರ ಮಾದರಿಯಲ್ಲಿ ಆಟೋ, ಕ್ಯಾಬ್ ಚಾಲಕರಿಗೆ ನೆರವು ಘೋಷಿಸಲಿ: ಜಿ.ವೆಂಕಟೇಶ ಮಡಿವಾಳ ಒತ್ತಾಯ

 
ರಾಯಚೂರು: ಆಂಧ್ರಪ್ರದೇಶದ ಮುಖ್ಯಮಂತ್ರಿ ಸನ್ಮಾನ್ಯ ಚಂದ್ರಬಾಬು ನಾಯ್ಡು ಅವರು “ಆಟೋ ಡ್ರೈವರ್ ಸೇವಾಲೋ” ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಅದರಡಿ ರಾಜ್ಯದ ಎಲ್ಲ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ವಾರ್ಷಿಕ ₹15,000 ನೆರವು ನೀಡುವ ಘೋಷಣೆ ಮಾಡಿದ್ದಾರೆ ಎಂದು ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ವೆಂಕಟೇಶ ಮಡಿವಾಳ ತಿಳಿಸಿದ್ದಾರೆ.

ನಗರದಲ್ಲಿ ಪ್ರಕಟಣೆ ನೀಡಿದ ಅವರು, “ಆಂಧ್ರ ಮಾದರಿಯ ಯೋಜನೆಯಿಂದ ಅಲ್ಲಿ ಆಟೋ, ಕ್ಯಾಬ್ ಚಾಲಕರ ಕುಟುಂಬಗಳಿಗೆ ದೊಡ್ಡ ಆಸರೆಯಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಉಚಿತ ಯೋಜನೆಗಳ ಪರಿಣಾಮದಿಂದ ಚಾಲಕರ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಸರ್ಕಾರವು ತಕ್ಷಣ ಚಾಲಕರ ನಿಜಸ್ಥಿತಿ ಅವಲೋಕಿಸಿ, ಆಂಧ್ರ ಮಾದರಿಯಲ್ಲೇ ನೆರವು ಯೋಜನೆ ರೂಪಿಸಿ ಘೋಷಿಸಬೇಕು” ಎಂದು ಒತ್ತಾಯಿಸಿದರು.

ವೆಂಕಟೇಶ ಮಡಿವಾಳ ಅವರು, “ಆಟೋ ಹಾಗೂ ಕ್ಯಾಬ್ ಚಾಲಕರು ದಿನಪತ್ರಿ ದುಡಿಯುವ ಶ್ರಮಜೀವಿಗಳು. ಇಂಧನ ಬೆಲೆ ಏರಿಕೆ, ಸ್ಪೇರ್‌ಪಾರ್ಟ್ಸ್ ದರಗಳು ಹಾಗೂ ಆನ್‌ಲೈನ್ ಕ್ಯಾಬ್ ಕಂಪನಿಗಳ ಕಡಿತ ದರಗಳಿಂದ ಜೀವನ ಸಂಕಷ್ಟದಲ್ಲಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರವೇ ಅವರ ಬೆಂಬಲವಾಗಿ ನಿಲ್ಲಬೇಕು” ಎಂದು ಮನವಿ ಮಾಡಿದರು.

Post a Comment

ನವೀನ ಹಳೆಯದು