ರಾಯಚೂರು: ಯುವ ಶಕ್ತಿಯೊಂದಿಗೆ ನಗರವನ್ನು ಸ್ವಚ್ಛ ಹಾಗೂ ಹಸಿರುಗೊಳಿಸುವ ಉದ್ದೇಶದಿಂದ ರಾಯಚೂರು ನಗರ ಪಾಲಿಕೆ ವತಿಯಿಂದ “ಸಿಟಿ ಫಾರ್ ಯೂತ್ ಅಂಡ್ ಯೂತ್ ಫಾರ್ ಸಿಟಿ” ಯೋಜನೆಯಡಿ ‘ರಾಯಚೂರು ಮ್ಯಾರಥಾನ್’ ಕಾರ್ಯಕ್ರಮವನ್ನು ಅಕ್ಟೋಬರ್ 9, 2025 ರಂದು ಹಮ್ಮಿಕೊಳ್ಳಲಾಗಿದೆ. “Raichur’s Promise Run – for a future Clean-Green Raichur” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಈ ಓಟಕ್ಕೆ ನಗರ ಯುವಕರು ಉತ್ಸಾಹದಿಂದ ಸಜ್ಜಾಗಿದ್ದಾರೆ.
ನಗರದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮಾರ್ಗ ನಕ್ಷೆ ಪ್ರಕಾರ ಓಟಗಾರರು ಕ್ರೀಡಾಂಗಣದಿಂದ ಪ್ರಾರಂಭಿಸಿ ಅಂಬೇಡ್ಕರ್ ವೃತ್ತ – ಸ್ಟೇಷನ್ ಸರ್ಕಲ್ – ನವೀನ್ ಆಸ್ಪತ್ರೆ (ಯು-ಟರ್ನ್) – ಸ್ಟೇಷನ್ ಸರ್ಕಲ್ – ಕ್ರೀಡಾಂಗಣ ಮಾರ್ಗವಾಗಿ ಓಟವನ್ನು ಪೂರ್ಣಗೊಳಿಸಲಿದ್ದಾರೆ.
ಈ ಮ್ಯಾರಥಾನ್‌ನಲ್ಲಿ 17 ರಿಂದ 35 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ಭಾಗವಹಿಸಲು ಅವಕಾಶವಿದೆ. ವಿಜೇತರಿಗೆ ನಗದು ಬಹುಮಾನಗಳನ್ನೂ ನೀಡಲಾಗಿದ್ದು, ಮೊದಲ ಸ್ಥಾನಕ್ಕೆ ₹5,000, ಎರಡನೇ ಸ್ಥಾನಕ್ಕೆ ₹3,500 ಹಾಗೂ ಮೂರನೇ ಸ್ಥಾನಕ್ಕೆ ₹2,500 ನಗದು ಬಹುಮಾನ ನೀಡಲಾಗುತ್ತದೆ.
ಕಾರ್ಯಕ್ರಮವನ್ನು ರಾಯಚೂರು ನಗರ ಪಾಲಿಕೆ ಆಯೋಜಿಸಿದ್ದು, ಯುವಶಕ್ತಿ ಮತ್ತು ಕ್ರೀಡಾ ಇಲಾಖೆಯೊಂದಿಗೆ KSAPS – ಜಿಲ್ಲಾ ಎಯ್ಡ್ಸ್ ತಡೆ ಮತ್ತು ನಿಯಂತ್ರಣ ಘಟಕ ಸಹಯೋಗ ನೀಡುತ್ತಿದೆ. ಈ ಕಾರ್ಯಕ್ರಮವು “City for Youth – Youth for City” ಯೋಜನೆಯಡಿ ನಡೆಯುತ್ತಿದೆ.

ಕಾಮೆಂಟ್ ಪೋಸ್ಟ್ ಮಾಡಿ