Top News

ಮೂರು ತಿಂಗಳು ಮಾವಿನ ಕೆರೆ ಬಂದ್.. ಕಾರಣ ಏನು?

 


ರಾಯಚೂರು: ನಗರ ಮಹಾನಗರ ಪಾಲಿಕೆ ವ್ಯಾಪ್ತಿಯ ಮಾವಿನಕೆರೆ ಉದ್ಯಾನವನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಮ್ಮಿಕೊಳ್ಳಲಾಗಿರುವುದರಿಂದ, ಮುಂದಿನ ಮೂರು ತಿಂಗಳುಗಳ ಕಾಲ ಉದ್ಯಾನವನ್ನು ಮುಚ್ಚಲಾಗಿರುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ಮಾವಿನಕೆರೆ ಪಬ್ಲಿಕ್ ಗಾರ್ಡನ್ ಅಭಿವೃದ್ಧಿ ಕಾರ್ಯಗಳನ್ನು, ರಸ್ತೆ ನಿರ್ಮಾಣ, ಕಾಲುದಾರಿ ಇಂಟರ್‌ಲಾಕಿOಗ್ ವ್ಯವಸ್ಥೆ, ಬೇಲಿ ಕಾಮಗಾರಿಗಳು, ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆ ಸೇರಿದಂತೆ ಸೌಂದರ್ಯೀಕರಣ ಮತ್ತು ಮೂಲಸೌಕರ್ಯ ವಿಸ್ತರಣೆ ಕಾಮಗಾರಿಗಳು ಕೈಗೊಳ್ಳಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳಿಗೆ ಸಮರ್ಪಕ ಸಮಯ ದೊರಕಿಸಲು ಉದ್ಯಾನವನ್ನು ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ದಿನಾಂಕ 29–11–2025 ರಿಂದ ಮುಂದಿನ ಮೂರು ತಿಂಗಳುಗಳವರೆಗೆ ಸಾರ್ವಜನಿಕರು ಉದ್ಯಾನ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿ ಸಹಯೋಗ ನೀಡುವಂತೆ ನಗರದ ನಾಗರೀಕರಿಗೆ ಅವರು ವಿನಂತಿಸಿದ್ದಾರೆ.

Post a Comment

ನವೀನ ಹಳೆಯದು