ರಾಯಚೂರು: ದೇಶದ ಮಹಿಳೆಯರು ಶಿಕ್ಷಣವಂತರಾಗಿ ಉನ್ನತ ಸ್ಥಾನ ತಲುಪಿದಾಗ ಮಾತ್ರ ಭಾರತ ಸಂವಿಧಾನಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ಕೆ.ನಿತೀಶ ಹೇಳಿದರು.
ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮOದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಸಾಕಷ್ಟು ಜಾತಿ, ಧರ್ಮ, ಭಾಷೆ, ಪಂಥ, ಆಚರಣೆ, ಆಚಾರ ವಿಚಾರಗಳಿಂದ ಬೃಹತ್ ದೇಶದ ನಾಗರಿಕೆಗೆ ಸಮಾನತೆಯನ್ನು ಹಾಗೂ ನ್ಯಾಯವನ್ನು ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದು ದೇಶಕ್ಕೆ ಅರ್ಪಿಸಿ, ದೇಶದ ಜನರಿಗೆ ಸಮಾನತೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಪ್ರಸ್ತುತವೂ ನಾವು ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಇಂದು ಕಾಣುತ್ತಿದ್ದು, ಆದರೆ ಸ್ವಾತಂತ್ರö್ಯಪೂರ್ವದಲ್ಲಿ ಈ ಅಸಮಾನತೆಗಳೂ ಇನ್ನೂ ಹೆಚ್ಚಾಗಿದ್ದವು. ಅವುಗಳನ್ನು ತೊಲಗಿಸಲು ಮತ್ತು ಈ ಅಸಮಾನತೆಗಳಿಂದ ಬಳಲುತ್ತಿದ್ದ ಜನರಿಗೆ ನ್ಯಾಯ ಕೊಡಿಸಲು ಅಂಬೇಡ್ಕರ್ ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಇತರೆ ದೇಶದಲ್ಲಿ ಇಂದಿಗೂ ಜನರು ಮೂಲಭೂತ ಹಕ್ಕುಗಳಿಲ್ಲದೇ ಒದ್ದಾಡುತ್ತಿದ್ದು, ಅಂಬೇಡ್ಕರ್ ಅವರು ಆ ದೇಶಗಳಲ್ಲಿ ಹುಟ್ಟದೇ ಇರುವುದು ಆ ದೇಶಗಳ ದುರಾದೃಷ್ಠ ಸಂಗತಿಯಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣವನ್ನು ಪಡೆಯುವ, ಉದ್ಯೋಗಿಗಳಾಗುವ ಅವಕಾಶವನ್ನು ನೀಡಲಾಗಿದೆ. ಆದ್ದರಿಂದ ಮಹಿಳೆಯರು ಉನ್ನತ ಸ್ಥಾನಕ್ಕೆ ತಲುಪಬೇಕು. ಸಂವಿಧಾನದ ಆಶಯಗಳು ಆಶಯಗಳಾಗಿ ಉಳಿಯದೇ ನಿಜವಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾ ಶಾವಂತಗೇರಾ ಮಾತನಾಡಿ, ಭಾರತ ವಿಸ್ತೃತವಾದ ದೇಶವಾಗಿದ್ದು, ಇಲ್ಲಿ ಪ್ರಾದೇಶಿಕ, ಭಾಷಿಕ, ಧಾರ್ಮಿಕತೆಯಲ್ಲಿ ವಿವಿಧತೆಯನ್ನು ಕಾಣಬಹುದಾಗಿದೆ. ಆ ವಿವಿಧತೆಗಳನ್ನು ಏಕತೆಗೆ ತರಲು ಸಂವಿಧಾನದಿAದ ಸಾಧ್ಯವಾಗಿದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ, ಅಘಾದವಾದ ಸಂವಿಧಾನ ಬರೆಯಲು ಅಂಬೇಡ್ಕರ್‌ಅವರೇ ಸೂಕ್ತ ಎಂದು ಅಂದಿನ ನಾಯಕರು ಅನುಮೋಧನೆ ನೀಡಿದ್ದರು ಅದರಂತೆ ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಲು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಉತ್ತಮ ಅಂಶಗಳನ್ನು ನೀಡಿದ್ದಾರೆ. ಸದೃಢ ದೇಶ ನಿರ್ಮಾಣ ಸಂವಿಧಾನದಿOದ ಮಾತ್ರ ಸಾಧ್ಯ ಅದನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸುಭಾಷ್‌ಚಂದ್ರ ಉಪನ್ಯಾಸ ನೀಡಿ, ಸ್ವಾತಂತ್ರö್ಯಪೂರ್ವದಲ್ಲಿ 33 ಕೋಟಿ ಜನಸಂಖ್ಯೆ ಇದ್ದ ಭಾರತದಲ್ಲಿ ಅಸಮಾನತೆ ತಾಂಡವವಾಡುತ್ತಿತ್ತು. ಅಂತಹ ಸ್ಥಿತಿಯಲ್ಲಿ ದೇಶಕ್ಕೆ, ದೇಶದ ಜನರಿಗೆ ನ್ಯಾಯ ಕೊಡಿಸಲು ಸಂವಿಧಾನವನ್ನು ಜಾರಿಗೆ ತರಲಾಯಿತು. ಸಂವಿಧಾನ ಕುರಿತು ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿದೇರ್ಶಕಿ ಸಿಂಧು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿ ಎಂ.ರವಿ, ರಾಜೇಂದ್ರ ಜಲ್ದಾರ ಸೇರಿದಂತೆ ಅನೇಕರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ