Top News

ಕಳ್ಳತನ ಪತ್ತೆ: ಆರೋಪಿಯಿಂದ 2.80 ಲಕ್ಷ ರೂ.ಮೌಲ್ಯದ ಬಂಗಾರ, ಬೆಳ್ಳಿ ಆಭರಣ ವಶ


ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದ ಕಂಬಳಿಮಠ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ, ಆರೋಪಿಯನ್ನು ವಶಕ್ಕೆ ಪಡೆದು 2.80 ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಅಂತರ್ಜಲ ವೃದ್ಧಿ ಮತ್ತು ನೀರಾವರಿ ಅಭಿವೃದ್ಧಿಗೆ ವೈಜ್ಞಾನಿಕ ನಿಲುವು – ಡಿಕೆ ಶಿವಕುಮಾರ್

ಪಟ್ಟಣದ ಶೈಲಮ್ಮ ಎಂಬುವರ ಮನೆ ಕಳ್ಳತನವಾದ ಪ್ರಕರಣ ಅ.19ರಂದು ಮಸ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಪುಟ್ಟಮಾದಯ್ಯ ಮಾರ್ಗದರ್ಶನದಲ್ಲಿ ಬಾಲಚಂದ್ರ ಮಸ್ಕಿ ಸಿಪಿಐ ಡಿ. ಲಕ್ಕಂ, ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ತಂಡದಲ್ಲಿ ಪಿ.ಎಸ್.ಐ ರಂಗಯ್ಯ ಕೆ., ಸಿಪಿಸಿ ಜಡೆಪ್ಪ, ಸಾಬುದ್ದೀನ್, ಅಡಿವೆಪ್ಪ ಹಾಗೂ ಸಿಚ್.ಸಿ ಸಿದ್ದಾರೆಡ್ಡಿ ಕಾರ್ಯಾಚರಣೆ ನಡೆಸಿ, ಆರೋಪಿತ ಸುಂಕನೂರು ಗ್ರಾಂದ ಶಿವರಾಜಎಂಬಾತನನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆರೋಪಿಯಿಂದ 10 ಗ್ರಾಂ ಗುಂಡಿನ ಸರ, 10 ಗ್ರಾಂ ಎಳಿ ಸರ, 3 ಗ್ರಾಂ ತಾಳಿ ಮತ್ತು 100 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು 2,80,000 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿದ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರದ್ಧಾಶೀಲ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕ ಪುಟ್ಟಮಾದಯ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Post a Comment

ನವೀನ ಹಳೆಯದು