Top News

ಜೀ ಕನ್ನಡ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ‘ಕಾಮಿಡಿ ಕಿಲಾಡಿಗಳು’ ಮಹಾ ಆಡಿಷನ್ ರಾಯಚೂರಲ್ಲಿ ಸೆ.9ರಂದು

 


ರಾಯಚೂರು: ಪ್ರತಿಭೆಗಳನ್ನು ಗುರುತಿಸುವಲ್ಲಿ ನಂ.1 ಚಾನೆಲ್ ಆದ ಜೀ ಕನ್ನಡ ವಾಹಿನಿ ಇದೀಗ ಮತ್ತೊಮ್ಮೆ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆ ಕಲ್ಪಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಾಮಿಡಿ ಕಿಲಾಡಿಗಳು ಆಡಿಷನ್‌ಗಳು ರಾಜ್ಯದ 31 ಜಿಲ್ಲೆಗಳಲ್ಲಿ ನಡೆಯಲಿದ್ದು, ರಾಯಚೂರಿನಲ್ಲಿ ಸೆಪ್ಟೆಂಬರ್ 09, ಮಂಗಳವಾರ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ.


ಆಡಿಷನ್ ಕಾರ್ಯಕ್ರಮವು ನಗರದ ಇಂಟರ್ ನ್ಯಾಷನಲ್ ಡೆಲ್ಲಿ ಪಬ್ಲಿಕ್ ಸ್ಕೂಲ್, ವಾಡ್ ವಾಟಿ ಪೋಸ್ಟ್, ಗಡ್ವಾಲ್ ರಸ್ತೆಯಲ್ಲಿ ಜರುಗಲಿದೆ.


ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಭಾಗವಹಿಸುವವರ ವಯೋಮಿತಿ 6 ರಿಂದ 60 ವರ್ಷಗಳವರೆಗೆ ಇರಬೇಕು. ಭಾಗವಹಿಸುವವರು ಉತ್ತಮ ಡ್ಯಾನ್ಸ್ ಪ್ರದರ್ಶನ ತೋರಬೇಕು.

ಕಾಮಿಡಿ ಕಿಲಾಡಿಗಳಲ್ಲಿ ಭಾಗವಹಿಸುವವರ ವಯೋಮಿತಿ 16 ರಿಂದ 60 ವರ್ಷಗಳವರೆಗೆ ನಿಗದಿಯಾಗಿದ್ದು, ಭಾಗವಹಿಸುವವರು ಸ್ವಂತ ಕಾಮಿಡಿ ಸ್ಕಿಟ್ ತಂದು ತೋರಿಸಬೇಕು. ರೀಲ್ಸ್ ವಿಡಿಯೋಗಳಿಗೆ ಅವಕಾಶವಿಲ್ಲ ಎಂದು ವಾಹಿನಿ ಸ್ಪಷ್ಟಪಡಿಸಿದೆ.


ಆಡಿಷನ್‌ಗೆ ಬರುವವರು ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ಜೆರಾಕ್ಸ್ ಜೊತೆಯಲ್ಲಿ ತರಬೇಕು. ಜೀ ಕನ್ನಡ ವಾಹಿನಿಯು ಆಡಿಷನ್‌ಗೆ ಯಾವುದೇ ಶುಲ್ಕ ವಿಧಿಸಿಲ್ಲ, ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.


Post a Comment

ನವೀನ ಹಳೆಯದು