ರಾಯಚೂರು: ಬಾಲಕಾರ್ಮಿಕ ಕಾಯ್ದೆಯಡಿ ಜಾರಿಯಾಗಿದ್ದ ಸೆಮನ್ಸ್ ಅನ್ನು ಬಾರದಹಾಗೆ ನೋಡಿಕೊಳ್ಳುವುದಾಗಿ ಹೇಳಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ಸೋಮವಾರ ಮದ್ಯಾಹ್ನ 3 ಗಂಟೆ ಸುಮಾರಿಗೆ ಜರುಗಿದೆ.
ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ನಿರೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಮಹ್ಮದ್ ಗನಿ ಮತ್ತು ಬಾಲಕಾರ್ಮಿಕ ಯೋಜನೆಯಡಿಯಲ್ಲಿ ಯೋಜನಾ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥರೆಡ್ಡಿ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಯರಮರಸ್ ಬಳಿಯ ವಿಜಯಲಕ್ಷಿö್ಮÃ ಪೆಟ್ರೋಲ್ ಬಂಕ್‌ನಿOದ ಕಾರ್ಮಿಕ ಪರವಾನಿಗೆ ಪಡೆದಿಲ್ಲದ ಕಾರಣ, ಸೆಮನ್ಸ್ ಜಾರಿಯಾಗುವುದನ್ನು ತಪ್ಪಿಸಲು, ಈ ಅಧಿಕಾರಿಗಳು 2.50 ಲಕ್ಷ ರೂ.ಯ ಬೇಡಿಕೆಯನ್ನಿಟ್ಟಿದ್ದರು. 70 ಸಾವಿರ ರೂ.ಗಳಿಗೆ ಮಾತುಕತೆ ಮುಗಿಸಿಕೊಂಡಿದ್ದರು. ನಂತರ 40 ಸಾವಿರ ಮುಂಗಡವಾಗಿ ಪಡೆದುಕೊಂಡು ನಂತರ 30 ಸಾವಿರ ಬಾಕಿ ಹಣವನ್ನು ಕಾರ್ಮಿಕ ಇಲಾಖೆ ಕಚೇರಿ ಮುಂದೆಯೇ ಮಹ್ಮದ್ ಗನಿ ಎಂಬ ಅಧಿಕಾರಿ ಪಡೆದುಕೊಳ್ಳುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿ, ಗನಿ ಅನ್ನುವ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಮಂಜುನಾಥರೆಡ್ಡಿ ಎಂಬುವವರು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುವುದು ತಿಳಿದುಬಂದಿದೆ.
ಮದ್ಯಾಹ್ನದಿಂದ ರಾತ್ರಿವರೆಗೂ ಕಾರ್ಮಿಕ ಇಲಾಖೆಯಲ್ಲಿ ಲೋಕಾಯುಕ್ತ ಪೊಲೀಸರು. ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಪ್ಪಿ, ನೇತೃತ್ವದಲ್ಲಿ ಅಧಿಕಾರಿಗಳಾದ ರವಿ ಪುರುಷೋತ್ತಮ, ಕಾಳಪ್ಪ, ಸಿಬ್ಬಂದಿ ಏಕಂಬರನಾಥ, ರವೀಂದ್ರ ಸೇರಿದಂತೆ ಅನೇಕರು ದಾಳಿಯಲ್ಲಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ