Top News

ರಾಯಚೂರಿನಲ್ಲಿ ಬಾರ್-ಹೋಟೆಲ್‌ಗಳ ಮೇಲೆ ದಾಳಿ: ರೂ.50 ಸಾವಿರದ ದಂಡ


ರಾಯಚೂರು: ನಗರದ ಬಾರ್‌ಗಳು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಸ್ವಚ್ಛತೆ ನಿಯಮ ಉಲ್ಲಂಘನೆ ವಿರುದ್ಧ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಂಯುಕ್ತ ದಾಳಿ ನಡೆಸಿ, 10ಕ್ಕೂ ಹೆಚ್ಚು ಸಂಸ್ಥೆಗಳ ಮೇಲೆ ಕ್ರಮ ಕೈಗೊಂಡಿದೆ.

ಎರಡು ತಂಡಗಳ ಕಾರ್ಯಾಚರಣೆ:

👉 ಈ ಕಾರ್ಯಾಚರಣೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡವನ್ನು ಉಪ ಆಯುಕ್ತರು (ಕಂದಾಯ) ಮತ್ತು ವಲಯ ಆಯುಕ್ತರು–2 ಮುನ್ನಡೆಸಿದರು.

ಇನ್ನೊಂದು ತಂಡವನ್ನು ಸಹಾಯಕ ಆಯುಕ್ತರು ರಾಯಚೂರು, ತಹಶೀಲ್ದಾರರು, ಹಾಗೂ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಮುನ್ನಡೆಸಿದರು.

ವಿಧಿಸಿದ ದಂಡ:

🔹 ದಾಳಿಯ ಸಂದರ್ಭದಲ್ಲಿ ಸ್ವಚ್ಛತೆ ನಿಯಮ ಪಾಲಿಸದಿದ್ದ ಕಾರಣಕ್ಕೆ 10ಕ್ಕೂ ಹೆಚ್ಚು ಬಾರ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೆ ಒಟ್ಟು ರೂ.50,000 ದಂಡ ವಿಧಿಸಲಾಯಿತು.

ಕಟ್ಟುನಿಟ್ಟಿನ ಎಚ್ಚರಿಕೆ:

ಮುಂದೆ ಏಕಬಳಕೆ ಪ್ಲಾಸ್ಟಿಕ್, ನೀರಿನ ಪೌಚ್‌ಗಳು ಹಾಗೂ ನಿಷೇಧಿತ ರಾಸಾಯನಿಕ ಪದಾರ್ಥಗಳ ಬಳಕೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. 

ಹೋಟೆಲ್ ಹಾಗೂ ರೆಸ್ಟೋರೆಂಟ್ ಸಿಬ್ಬಂದಿಗಳು ಸ್ವಚ್ಛರಾಗಿರಬೇಕು, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಕಡ್ಡಾಯ.

ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ನಿಯಮಗಳನ್ನು ಪಾಲಿಸದಿದ್ದಲ್ಲಿ ದಂಡದ ಜೊತೆಗೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಅಗತ್ಯವಿದ್ದರೆ ಅಂಗಡಿ ಮುಟ್ಟುಗೋಲು ಹಾಕುವ ಕ್ರಮ ಕೈಗೊಳ್ಳಲಾಗುವುದು.


 - ಆಯುಕ್ತರು, ಮಹಾನಗರ ಪಾಲಿಕೆ ರಾಯಚೂರು

Post a Comment

ನವೀನ ಹಳೆಯದು