ನವದೆಹಲಿ: ಈ ವರ್ಷದ ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21ರಂದು ಸಂಭವಿಸಲಿದೆ. ವಿಶೇಷವೆಂದರೆ ಈ ಬಾರಿ ಗ್ರಹಣವು ಮಹಾಲಯ ಅಮಾವಾಸ್ಯೆ ದಿನವೇ ಬರಲಿದೆ. ಕೇವಲ 15 ದಿನಗಳ ಹಿಂದೆ (ಸೆ.7) ಚಂದ್ರಗ್ರಹಣ ಕಂಡುಬಂದಿದ್ದರೆ, ಇದೀಗ ಸೂರ್ಯಗ್ರಹಣ ಬರಲಿದೆ.
ವಿಜ್ಞಾನಿಗಳ ಮಾಹಿತಿ ಪ್ರಕಾರ, ಈ ಸೂರ್ಯಗ್ರಹಣವು ಸಂಪೂರ್ಣ ಗ್ರಹಣವಲ್ಲ. ಸೆ.21ರಂದು ರಾತ್ರಿ 11 ಗಂಟೆಯಿಂದ ಮರುದಿನ ಮುಂಜಾನೆ 3.23ರವರೆಗೆ ಗ್ರಹಣ ಇರಲಿದೆ. ಆದರೆ ಭಾರತದಲ್ಲಿ ಇದು ಗೋಚರಿಸುವುದಿಲ್ಲ. ಬದಲಾಗಿ, ಮೆರಿಕಾದ ಸಮೋವಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಕುಕ್ ಐಸ್‌ಲ್ಯಾಂಡ್, ಫಿಜಿ, ಫ್ರೆಂಚ್ ಪೋಲಿನೇಷ್ಯಾ, ಪೆಸಿಫಿಕ್ ದ್ವೀಪಗಳು ಹಾಗೂ ಓಷಿಯಾನಿಯಾ ಪ್ರದೇಶಗಳಲ್ಲಿ ಮಾತ್ರ ಇದನ್ನು ಕಾಣಬಹುದು.
ಧಾರ್ಮಿಕ ದೃಷ್ಟಿಯಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸೂರ್ಯಗ್ರಹಣವು ಮಹಾಲಯ ಅಮಾವಾಸ್ಯೆಯಂದೇ ಬಂದರೂ, ಶ್ರಾದ್ಧ ಹಾಗೂ ಪಿಂಡದಾನ ವಿಧಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದೇ ರೀತಿ, ಪೂಜೆ ಅಥವಾ ಇತರ ದೈನಂದಿನ ಚಟುವಟಿಕೆಗಳ ಮೇಲೂ ಇದರಿಂದ ಅಡ್ಡಿಪಡಿಸುವುದಿಲ್ಲ.
ಇದಲ್ಲದೆ, ಗ್ರಹಣವು ಭಾರತದಲ್ಲಿ ರಾತ್ರಿ ಸಮಯದಲ್ಲಿ ಸಂಭವಿಸುವುದರಿಂದ ಸೂತಕ ಕಾಲ ಅನ್ವಯಿಸುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಕಾಮೆಂಟ್ ಪೋಸ್ಟ್ ಮಾಡಿ