ರಾಯಚೂರು: ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ, ಸಮೀಕ್ಷೆಯಲ್ಲಿ ನಮ್ಮ ಸಮುದಾಯವರು ಧರ್ಮದ ಕಾಲಂನಲ್ಲಿ ಇಸ್ಲಾಂ ಹಾಗೂ ಜಾತಿಯ ಕಾಲಂನಲ್ಲಿ ಪಿಂಜಾರ್, ನಧಾಫ್ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಇಮ್ರಾನ್ ಬಡೇಸಾಬ್ ಮನವಿ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪಿಂಜಾರ್, ನಧಾಫ್ ಸಮುದಾಯವು ಪರಂಪರೆಯಿಂದಲೇ ಹತ್ತಿ ಶುದ್ಧಗೊಳಿಸುವ ಕೌಶಲ್ಯವನ್ನು ವೃತ್ತಿಯಾಗಿ ಮುಂದುವರಿ ಸಿಕೊಂಡಿದೆ. ಸಮೀಕ್ಷೆಯ ಸಂದರ್ಭ ದಲ್ಲಿ ತಪ್ಪಾದ ದಾಖಲೆಗಳು ಮುಂದಿನ ದಿನಗಳಲ್ಲಿ ಗೊಂದಲಕ್ಕೆ ಕಾರಣವಾಗಬಾರದು. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ಒಂದೇ ರೀತಿಯ ಮಾಹಿತಿ ನೀಡುವುದು ಅತ್ಯಗತ್ಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಖಾಸೀಂ ಸಾಬ್ ಎಳ್ಳಿಮಣಿ, ಖಾಸರ್ ಸಾಬ್, ಶಾಲಂ, ಶಫಿ ಗುಂಜಳ್ಳಿ, ಶಾಲಂಸಾಬ್, ಜಾಫರ್ ಸಾಬ್, ಜಮೀರ್ ಪಾಶಾ, ಚಾಂದ್ ಪಾಶಾ ಸೇರಿದಂತೆ ಅನೇಕರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ