ರಾಯಚೂರು: ನಗರದ 15ನೇ ಹಣಕಾಸು ಆಯೋಗದ ಅಡಿಯಲ್ಲಿ 6–7 ವರ್ಷಗಳಿಂದ ಬಾಕಿ ಉಳಿದ ಕಾಮಗಾರಿಗಳನ್ನು ಪರಿಶೀಲಿಸಲು ಮಹಾನಗರ ಪಾಲಿಕೆಯ ಆಯುಕ್ತರು ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿದರು.
ಠೇಕುದಾರರಿಗೆ ಕಠಿಣ ಸೂಚನೆ:
> “ಎಲ್ಲಾ ಉಳಿದಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು. ಅಗಲ, ಉದ್ದ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನಿಗದಿತ ಗುಣಮಟ್ಟ ಹಾಗೂ ಸಮಯಕ್ಕೆ ಕಾರ್ಯ ಪೂರೈಸಲೇಬೇಕು.”
ಆಯುಕ್ತರು ಘನ ತ್ಯಾಜ್ಯ ನಿರ್ವಹಣೆ (SWM) ಕಾರ್ಯಗಳನ್ನೂ ಪರಿಶೀಲಿಸಿದರು. ನಗರದಲ್ಲಿನ ಅನಧಿಕೃತ “ಬ್ಲಾಕ್ ಸ್ಪಾಟ್”ಗಳನ್ನು ತಕ್ಷಣ ತೆರವುಗೊಳಿಸುವಂತೆ ತಂಡಕ್ಕೆ ಆದೇಶಿಸಿದರು.
ಈಗಾಗಲೇ ಅನೇಕ ಸ್ಥಳಗಳನ್ನು ಸ್ವಚ್ಛಗೊಳಿಸಿರುವ ಪರಿಣಾಮ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸ್ಥಳೀಯರು ಸಂತೋಷ ವ್ಯಕ್ತಪಡಿಸಿದರು.
ನಾಗರಿಕರಿಗೆ ಎಚ್ಚರಿಕೆ:
ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದನ್ನು ಕಂಡುಬಂದರೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆಗೆ ಇದುವೇ ಪ್ರಮುಖ ಕಾರಣ.
ಈ ಕ್ರಮಗಳ ಮೂಲಕ ನಗರದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಮುನ್ನಡೆಯುವ ನಿರೀಕ್ಷೆಯಿದ್ದು, ಮಹಾನಗರ ಪಾಲಿಕೆಯ ನಿರ್ವಹಣೆ ಹೆಚ್ಚು ಪಾರದರ್ಶಕ ಹಾಗೂ ಕಾರ್ಯಕ್ಷಮತೆಯಿಂದ ಸಾಗಲಿದೆ.

.jpeg)
ಕಾಮೆಂಟ್ ಪೋಸ್ಟ್ ಮಾಡಿ