ಘಟನೆ ಏನು..?:
ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ತಿಮ್ಮಾರೆಡ್ಡಿ ಅವರು ಜಿಂದಪ್ಪ ಅವರಿಗೆ ಫೋನ್ ಮಾಡಿ “ಎಲ್ಲಿ ಇದ್ದೀಯಾ” ಎಂದು ವಿಚಾರಿಸಿದಾಗ, ಜಿಂದಪ್ಪ ಅವರು “ಮಹಾನಗರ ಪಾಲಿಕೆ ಅಧ್ಯಕ್ಷರ ಚೇಂಬರ್ ಹತ್ತಿರದ ವಿಶ್ರಾಂತಿ ಕೋಣೆಯಲ್ಲಿ ಇದ್ದೇನೆ” ಎಂದು ತಿಳಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ತಿಮ್ಮಾರೆಡ್ಡಿ ಎಂಟು ಜನರೊಂದಿಗೆ ಸ್ಥಳಕ್ಕೆ ಬಂದು, ಅವಾಚ್ಯ ಶಬ್ದಗಳಿಂದ ಬೈದು, ಕೈ ಮುಷ್ಟಿಯಿಂದ ಜಿಂದಪ್ಪ ಅವರ ಕಪಾಳ ಮತ್ತು ಹಣೆಗೆ ಹೊಡೆದಿದ್ದಾರೆ ತಿಮ್ಮಾರೆಡ್ಡಿಯೊಂದಿಗೆ ಬಂದವರೂ ಸೇರಿ ಜಿಂದಪ್ಪ ಅವರ ದೇಹಕ್ಕೆ ಕೈಯಿಂದ ಹೊಡೆದಿದ್ದು, ಪರಿಣಾಮವಾಗಿ ಬಲಗೈ ಮುಂಗೈ, ಹಣೆ, ಎಡ ಕಪಾಳ ಹಾಗೂ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ಜೊತೆಗೆ, ತಿಮ್ಮಾರೆಡ್ಡಿ ಅವರ ಮೊಬೈಲ್ ಫೋನ್ ಜಿಂದಪ್ಪ ಅವರ ತಲೆಗೆ ಹೊಡೆದು, ಬಳಿಕ ಅದನ್ನು ಟೀ ಟೇಬಲ್‌ಗೆ ಬಡಿದು ಒಡೆದಿದ್ದು, ಟೇಬಲ್ ಗ್ಲಾಸ್ ಸಹ ಚೂರಾಗಿದೆ. ಸುಮಾರು ರೂ.80,000 ಮೌಲ್ಯದ ಮೊಬೈಲ್ ಫೋನ್ ಹಾನಿಯಾಗಿದೆಯೆಂದು ಜಿಂದಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಮೀನು ಖರೀದಿ ವಿವಾದ..? ಪಾಲಿಕೆ ಸದಸ್ಯ ಜಿಂದಪ್ಪ ಮೇಲೆ ತಿಮ್ಮಾರೆಡ್ಡಿ ಹಲ್ಲೆ – ಮಹಾಪೌರರ ಕಚೇರಿಯ ಪೀಠೋಪಕರಣ ಧ್ವಂಸ
ಈ ಘಟನೆ ನಡೆದ ಸಂದರ್ಭದಲ್ಲಿ ಪಾಲಿಕೆ ಮೇಯರ್ ನರಸಮ್ಮ ಮಾಡಗಿರಿ ಹಾಗೂ ಸದಸ್ಯೆ ಸೀತಮ್ಮ ಸ್ಥಳದಲ್ಲಿಯೇ ಇದ್ದರು ಎಂದು ಹೇಳಲಾಗಿದೆ. ಅಲ್ಲದೇ, ತಿಮ್ಮಾರೆಡ್ಡಿ ಮತ್ತೆ ಒಬ್ಬನೇ ಸಿಕ್ಕರೆ ನಿನ್ನನ್ನು ಮುಗಿಸಿಬಿಡುತ್ತೇನೆ” ಎಂದು ಜಿಂದಪ್ಪಗೆ ಜೀವ ಬೆದರಿಕೆ ಹಾಕಿ ಹೊರಟಿದ್ದಾರೆ ಎಂಬುದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜಿಂದಪ್ಪ ರಾತ್ರಿ 7.30ರ ಸುಮಾರಿಗೆ ಸದರ್ ಬಜಾರ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಾಮೆಂಟ್ ಪೋಸ್ಟ್ ಮಾಡಿ