Top News

ಮೈಸೂರು ದಸರಾ ಕವಿಗೋಷ್ಟಿ: ಈರಣ್ಣ ಬೆಂಗಾಲಿ ಆಯ್ಕೆ


 ರಾಯಚೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರದಾನ ಕವಿಗೋಷ್ಟಿಗೆ ರಾಯಚೂರಿನ ಸಾಹಿತಿ ಈರಣ್ಣ ಬೆಂಗಾಲಿ ಅವರು ಆಯ್ಕೆಯಾಗಿದ್ದಾರೆ. ಇದೇ ತಿಂಗಳು 27 ರಂದು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಕವಿಗೋಷ್ಟಿ ಜರುಗಲಿದ್ದು ಈರಣ್ಣ ಬೆಂಗಾಲಿ ಅವರು ರಾಯಚೂರು ಜಿಲ್ಲೆಯನ್ನು ಪ್ರತಿನಿಧಿಸಿ ಕವಿತೆಯನ್ನು ವಾಚನ ಮಾಡಲಿದ್ದಾರೆ.

ಇದನ್ನೂ ಓದಿ: ಜಮೀನು ಖರೀದಿ ವಿವಾದ..? ಪಾಲಿಕೆ ಸದಸ್ಯ ಜಿಂದಪ್ಪ ಮೇಲೆ ತಿಮ್ಮಾರೆಡ್ಡಿ ಹಲ್ಲೆ: ಮಹಾಪೌರರ ಕಚೇರಿಯ ಪೀಠೋಪಕರಣ ಧ್ವಂಸ


ಕವಿಗೋಷ್ಟಿಯ ಉದ್ಘಾಟನೆಯನ್ನು ಖ್ಯಾತ ಕವಿಗಳಾದ ಸಿ.ಪಿ.ಕೃಷ್ಣಮೂರ್ತಿ ಅವರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಮಲ್ಲಿಕಾಘಂಟಿ ಅವರು ವಹಿಸಲಿದ್ದಾರೆ.ಈರಣ್ಣ ಬೆಂಗಾಲಿ ಅವರು ಕವನ, ಗಜಲ್, ಹೈಕು, ವಚನ, ಕಥೆ, ಕಾದಂಬರಿಯಲ್ಲಿ ಕೃಷಿ ಮಾಡಿ ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಇತ್ತೀಚಿನನಮ್ಮ ರಾಯಚೂರು ಎಂಬ ಪುಸ್ತಕ ಜನಪ್ರಿಯಗೊಂಡಿದೆ. ಮಹತ್ವದ ಕವಿಗೋಷ್ಟಿಯಾದ ನಾಡಹಬ್ಬ ಮೈಸೂರು ದಸರಾ ಕವಿಗೋಷ್ಟಿಗೆ ಆಯ್ಕೆಯಾದ ಈರಣ್ಣ ಬೆಂಗಾಲಿ ಅವರಿಗೆ ಸಾಹಿತ್ಯ ವಲಯ, ಬಂಧು ಬಳಗ, ಸ್ನೇಹಿತರು ಮತ್ತು ಒಡನಾಡಿಗಳು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.

Post a Comment

ನವೀನ ಹಳೆಯದು