ರಾಯಚೂರು: ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಪ್ಲೆಕ್ಸ್, ಬ್ಯಾನರ್, ಬಂಟಿOಗ್ ಹಾಗೂ ಇತರೆ ಪ್ಲಾಸ್ಟಿಕ್/ಪೋಲಿಥಿನ್ ವಸ್ತುಗಳ ಬಳಕೆಗೆ ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಈ ನಿಷೇಧವು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು , ರಾಜ್ಯ ಹೆದ್ದಾರಿಗಳು ಪಕ್ಕದಲ್ಲಿರುವ ನಗರ ಭಾಗಗಳು ಹಾಗೂ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಿಗೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ನಿಷೇಧಿತ ಪ್ರದೇಶಗಳು: ಸ್ಟೇಷನ್ ಸರ್ಕಲ್, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ಬಸವೇಶ್ವರ ವೃತ್ತ, ಗಾಂಧಿ ಸರ್ಕಲ್, ಗಂಜ್ ಸರ್ಕಲ್, ಆರ್.ಟಿ.ಓ ಸರ್ಕಲ್, ಲಿಂಗಸೂಗೂರು ರಸ್ತೆ, ಸ್ಟೇಷನ್ ರಸ್ತೆ, ಐ.ಬಿ. ರೋಡ್, ಹೈದ್ರಾಬಾದ್ ರಸ್ತೆ, ಗೋಶಾಲಾ ರಸ್ತೆ, ಚಂದ್ರಮೌಳೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆ ಪಕ್ಕದ ಪ್ರದೇಶಗಳು, ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಹಾಗೂ ಸರ್ಕಾರಿ ಉದ್ಯಾನಗಳು ಮತ್ತು ಪಾರಂಪರಿಕ ಸ್ಥಳಗಳ ಸುತ್ತಮುತ್ತ ಪ್ಲೆಕ್ಸ್ ಬ್ಯಾನರ್ ಹಾಗೂ ಬಂಟಿOಗ್‌ಗಳ ಅಳವಡಿಕೆ ಸಂಪೂರ್ಣ ನಿಷೇಧವಾಗಿದೆ.
ಖಾಸಗಿ, ರಾಜಕೀಯ, ಸಾಮಾಜಿಕ, ವಾಣಿಜ್ಯ ಅಥವಾ ಇತರೆ ಯಾವುದೇ ಕಾರ್ಯಕ್ರಮಗಳಿಗಾಗಿ ಮೇಲ್ಕಂಡ ಪ್ರದೇಶಗಳಲ್ಲಿ ಪ್ಲೆಕ್ಸ್, ಬ್ಯಾನರ್ ಹಾಗೂ ಬಂಟಿAಗ್ ಬಳಕೆ ನಿಷೇಧಿತವಾಗಿದ್ದು, ಸಾರ್ವಜನಿಕ ಸ್ಥಳಗಳು, ವಿದ್ಯುತ್ ಕಂಬಗಳು, ಬೇಲಿಗಳು, ವೃಕ್ಷಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ಅಂಟಿಸುವುದಕ್ಕೂ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಪರಿಸರ ಸ್ನೇಹಿ ಪರ್ಯಾಯಗಳಿಗೆ ಅವಕಾಶ: ಪರಿಸರ ಸ್ನೇಹಿ ವಿಧಾನಗಳಾದ ಹವಾಮಾನ ಸಹಿಷ್ಣು ಕಾಗದದ ಬ್ಯಾನರ್, ಬಟ್ಟೆ ಬ್ಯಾನರ್ ಅಥವಾ ಡಿಜಿಟಲ್/ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಂದೇಶ ಹರಡುವಂತೆ ಸಾರ್ವಜನಿಕರು, ಸಂಘಟನೆಗಳು ಮತ್ತು ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ.
ಬಟ್ಟೆ ಬ್ಯಾನರ್‌ಗಳಿಗೆ ಪ್ರತಿ ಚದರ ಮೀಟರ್‌ಗೆ ರೂ.15 ಪರವಾನಿಗೆ ಶುಲ್ಕ, ಜೊತೆಗೆ ಶೇ.25ರಷ್ಟು ತೆರವುಗೊಳಿಸುವ ಶುಲ್ಕ ಹಾಗೂ ಶೇ.15 ಆರೋಗ್ಯ ಕರ ವಿಧಿಸಲಾಗುವುದು ಎಂದು ತಿಳಿಸಿದರು.
ಉಲ್ಲಂಘನೆಗೆ ಕಠಿಣ ದಂಡ: ನಿಷೇಧವನ್ನು ಉಲ್ಲಂಘಿಸಿದಲ್ಲಿ ಪ್ರತಿ ಅನಧಿಕೃತ ಬ್ಯಾನರ್‌ಗೆ ರೂ.15,000 ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಉಲ್ಲಂಘನೆ ಕಂಡುಬAದರೆ ರೂ.50,000 ದಂಡ ವಿಧಿಸುವುದರೊಂದಿಗೆ ಘನ ತ್ಯಾಜ್ಯ ನಿರ್ವಹಣಾ ನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.
ಅನುಮತಿ ಇಲ್ಲದೆ ಅಂಟಿಸಿದ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತಕ್ಷಣ ತೆರವುಗೊಳಿಸಿ, ಅದರ ಖರ್ಚನ್ನು ಸಂಬOಧಿಸಿದ ಅಪರಾಧಿಯಿಂದ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಯಚೂರು ನಗರವನ್ನು ಸ್ವಚ್ಛ ಹಾಗೂ ಹಸಿರಾಗಿರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಈ ಆದೇಶವನ್ನು ಆಡಳಿತಾತ್ಮಕ ಹಾಗೂ ಜನಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೊಳಿಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ