ರಾಯಚೂರು: ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ನಡೆಯಲಿರುವ ಜಾತಿ ಗಣತಿಯಲ್ಲಿ ಸವಿತಾ ಸಮಾಜದವರು ವಿವಿಧ ಜಾತಿ ಸೂಚಕ ಹೆಸರುಗಳನ್ನು ಬಳಸದೆ, ಏಕೀಕೃತವಾಗಿ ‘ಸವಿತಾ ಸಮಾಜ’ ಎಂದೇ ನಮೂದಿಸಬೇಕು ಎಂದು ಸಮಾಜದ ಮುಖಂಡ ವಿಜಯಬಾಸ್ಕರ್ ಇಟಗಿಯವರು ಮನವಿ ಮಾಡಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಸವಿತಾ ಸಮಾಜದಲ್ಲಿ ನಾಯಿಂದ, ಅಂಬಟ್ಟನ್, ಭಜಂತ್ರಿ, ಬಂಡಾರಿ, ಹಡಪದ, ಕವುಟಿಯನ್ ಸೇರಿದಂತೆ 25ಕ್ಕೂ ಹೆಚ್ಚು ಜಾತಿ ಸೂಚಕ ಹೆಸರುಗಳಿವೆ. ಇದರಿಂದ ಗೊಂದಲ ಉಂಟಾಗುತ್ತಿರುವುದರಿಂದ ಎಲ್ಲರೂ ‘ಸವಿತಾ ಸಮಾಜ’ ಎಂದೇ ದಾಖಲಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ನಲಗದಿನ್ನಿ, ವೆಂಕಟೇಶ ವೆಲೂರ್, ಸುಮಾ ಗಸ್ತಿ, ಗಾಯತ್ರಿ, ರಾಜು, ಭೀಮಣ್ಣ, ಅನಿಲ್, ಬಿ.ಬಸವರಾಜ ಸೇರಿದಂತೆ ಸಮಾಜದ ಅನೇಕರು ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ