ರಾಯಚೂರು: ತಾಲ್ಲೂಕಿನ ಕುರುಬದೊಡ್ಡಿ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯರು ಹಾಗೂ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು, ಪಂಚಾಯತ್ ಸದಸ್ಯರು ಹಾಗೂ ಯುವಕರು ಗ್ರಾಮದ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಮನವಿ ಮಾಡಿದರು.
ವಿಶೇಷವಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ತರಗತಿ ಕೊಠಡಿ,ಆಟದ ಮೈದಾನ, ಸಿಸಿ ರಸ್ತೆ ಮತ್ತು ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎ.ವಸಂತಕುಮಾರ ಅವರು ತಕ್ಷಣ ಕಾಮಗಾರಿ ಕೈಗೊಳ್ಳಲು ಅಂದಾಜು ಪಟ್ಟಿ ತಯಾರಿಸಲು ಸಂಬAಧಪಟ್ಟ ಇಂಜಿನಿಯರ್ ಅವರಿಗೆ ಸೂಚನೆ ನೀಡಿದ್ದು, ಇದೇ ವರ್ಷ ಕಾಮಗಾರಿ ಪ್ರಾರಂಭಿಸಲು ಕ್ರಮ ಜರುಗಿಸುವದಾಗಿ ಹೇಳಿದರು.
ಮಹಿಳೆಯರು ಭೇಟಿಯಾಗಿ ಹಲವಾರು ವರ್ಷಗಳಿಂದ ಸರಕಾರದ ಮನೆಗಳು ಮಂಜೂರು ಆಗಿರುವದಿಲ್ಲ, ಇದರಿಂದ ಬಡವರಿಗೆ ಸಮಸ್ಯೆಯಾಗುತ್ತಿದೆ ಎಂದು ಮನವಿ ಮಾಡಿದರು, ಇದರ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವದಾಗಿದೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ, ಕೆ.ಅಸ್ಲಂ ಪಾಶಾ, ಮೊಹಮ್ಮದ ಉಸ್ಮಾನ, ಆಂಜನೇಯ, ಬಸವರಾಜ, ಮಹೇಶ, ಭಿಮರೆಡ್ಡಿ, ಹನುಮಂತ, ಟೈಲರ್ ನರಸಪ್ಪ, ಜನಾರ್ಧನಗೌಡ, ಆನಂದ, ಶಿವರಾಜ ಹಾಗೂ ಇತರರು ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ